ಸುಖಾಂತ್ಯ ಕಂಡ ಮಲವಳ್ಳಿ ಅಪಹರಣ ಯತ್ನ ಶಂಕೆ ಪ್ರಕರಣ. ಸ್ಥಳಕ್ಕಾಗಮಿಸಿ ಪಾಲಕರಿಗೆ ಹಾಗೂ  ಮಕ್ಕಳಿಗೆ ಧೈರ್ಯ ತುಂಬಿ ಪರಿಸ್ಥಿತಿ ಅವಲೋಕಿಸಿದ  ಅಧಿಕಾರಿಗಳು…..”ಹಳ್ಳಿನ್ಯೂಸ್” ಗೆ ಧನ್ಯವಾದ ತಿಳಿಸಿದ ಗ್ರಾಮಸ್ಥರು

ಹಂಚಿಕೊಳ್ಳಿ

ಯಲ್ಲಾಪುರ : ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿಯ  ಜೋಗಾಳಕೇರಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಅಪಹರಣ ಮಾಡಲು ಅಪರಿಚಿತರು ಪ್ರಯತ್ನಿಸಿದ್ದಾರೆ ಎಂಬ ವಿಡಿಯೊವಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ    ಪ್ರಕರಣ ಸುಖ್ಯಾಂತ ಕಂಡಿದೆ.

ಈ ಕುರಿತು  ನಿನ್ನೆ ತಡರಾತ್ರಿ  “ಶಾಲಾ ಮಕ್ಕಳನ್ನು ಅಪಹರಿಸಲು ಯತ್ನ ಶಂಕೆ ? “ ಶಿರ್ಷಿಕೆ ಅಡಿಯಲ್ಲಿ “ಹಳ್ಳಿನ್ಯೂಸ್ ” ವರದಿ ಪ್ರಕಟಿಸಿತ್ತು. ವರದಿಯನ್ನು ಗಮನಿಸಿದ ಶಿಕ್ಷಣ ಇಲಾಖೆಯ ಸಿ ಆರ್ ಪಿ ಪ್ರಭಾಕರ ಭಟ್ ಹಾಗೂ  ಪೊಲೀಸ್ ಇಲಾಖೆಯ ಬೀಟ್ ಪೊಲೀಸ್ ಕರ್ಣಕುಮಾರ ಸ್ಥಳಕ್ಕಾಗಮಿಸಿ ಶಾಲಾ ಮಕ್ಕಳು ಹಾಗೂ ಪಾಲಕರೊಂದಿಗೆ ಚರ್ಚಿಸಿದರು. ನಂತರ ಮಕ್ಕಳೊಂದಿಗೆ ಪ್ರತ್ಯೆಕವಾಗಿ ಇಬ್ಬರು ಅಧಿಕಾರಿಗಳು ಮಾತನಾಡಿ ಘಟನೆಯ ವಿವರ ಪಡೆದರು. ಜೋಗಾಳಕೇರಿ ಬಸ್ ನಿಲ್ದಾಣದ ಸಮೀಪ ಮಕ್ಕಳು ಶಾಲೆಯಿಂದ  ಮನೆಗೆ ತೆರಳುವಾಗ ಮಳೆ ಇದ್ದ ಕಾರಣ ವಾಹನದಲ್ಲಿ ಡ್ರಾಪ್ ನಿಡುತ್ತೇವೆ ಎಂದು ತಿಳಿಸಿದ್ದರು  ಎನ್ನಲಾಗಿದೆ. ಆದರೆ ಮಕ್ಕಳು ಇದರಿಂದ ಭಯಗೊಂಡಿರಬಹುದು ಎಂದು ಕೆಲವರು ಚರ್ಚಿಸಿ , ಮಕ್ಕಳೊಂದಿಗೆ ಮಾತನಾಡಿದಾಗ ವಿಭಿನ್ನ ಉತ್ತರ ಬಂದ ಕಾರಣ  ಈ ಪ್ರಕರಣ ಇಲ್ಲಿಗೆ ಕೈ ಬಿಡಲಾಯಿತು ಎನ್ನಲಾಗಿದೆ.  ಈ ಅಪಹರಣ ಯತ್ನ ಶಂಕೆ ಬಗ್ಗೆ ಮಕ್ಕಳ  ವಿಡಿಯೋ ನೋಡಿದ  ಗ್ರಾಮಸ್ಥರಲ್ಲಿ  ಆತಂಕ ಮನೆ ಮಾಡಿತ್ತು. ಈ ಬಗ್ಗೆ “ಹಳ್ಳಿ ನ್ಯೂಸ್” ವರದಿ ಪ್ರಕಟಿಸಿದ ಬಗ್ಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *