18-7-2026 ಶನಿವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.
ಕರಾವಳಿಯ ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ಉ.ಕ. ದಲ್ಲಿ ಅಧಿಕ ಮಳೆಯಾಗಿದ್ದು ಕಾರವಾರ ತಾಲ್ಲೂಕು ಕದ್ರಾದಲ್ಲಿ191mm ಗರಿಷ್ಠ ಮಳೆಯಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಒಳನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ರಾಯಚೂರಿನಲ್ಲಿ ಅನಿರೀಕ್ಷಿತ ಭಾರೀ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನ ತನಕ ಮಳೆ ಪ್ರಮಾಣ ಅಲಾರ್ಟ್ ಗಿಂತ ಕಡಿಮೆ ಆಗಲಿದ್ದು ಮೋಡ – ಬಿಸಿಲಿನ ವಾತಾವರಣದ ಜೊತೆಗೆ ಅಲ್ಲಲ್ಲಿ ಸಣ್ಣ ಮಳೆ ಮುಂದುವರೆಯಲಿದೆ. ಸಂಜೆ – ರಾತ್ರಿ ಎಲ್ಲಾ ಜಿಲ್ಲೆಗಳಲ್ಲಿ ಒಂದೆರಡು ಸಾಧಾರಣ ಮಳೆ ಮುನ್ಸೂಚನೆ ಇದೆ. ಮುಂದಿನ 3 ದಿನ ಸಾಧಾರಣ ಮಳೆ ಮುಂದುವರಿಯಲಿದ್ದು ಉ.ಕ ಕರಾವಳಿಯಲ್ಲಿ ಅಧಿಕ ಮಳೆಯಾಗಬಹುದು. ಜುಲೈ 24 ರ ನಂತರ ಮತ್ತೆ ಮಳೆ ಪ್ರಮಾಣ ಕಡಿಮೆ ಆಗಬಹುದು.
ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಸಮೀಪದ ಘಟ್ಟಪ್ರದೇಶಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು.
ದಕ್ಷಿಣ ಒಳನಾಡಿನ ಚಾಮರಾಜನಗರ ಮೈಸೂರು ಮಂಡ್ಯ ರಾಮನಗರ ಕೋಲಾರ ಬೆಂಗಳೂರು ತುಮಕೂರು ದಾವಣಗೆರೆ ಚಿತ್ರದುರ್ಗ ವಿಜಯನಗರ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ನಂತರ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು.ಹಳೆಮೈಸೂರು ಭಾಗದ ಕೆಲವೆಡೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ಮೋಡ -ತುಂತುರು ಮಳೆ ಜುಲೈ 23 ತನಕ ಮುಂದುವರೆಯಬಹುದು.
ಉತ್ತರ ಒಳನಾಡಿನ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಬಳ್ಳಾರಿ ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.ಉಳಿದ ಜಿಲ್ಲೆಗಳಲ್ಲಿ ಮೋಡ – ತುಂತುರು ಮಳೆಯ ವಾತಾವರಣ ಇರಬಹುದು.
ಉತ್ತರ ಭಾರತದ ಲೋ ಪ್ರೆಷರ್ ಗಾಳಿಯ ತಿರುಗುವಿಕೆಯು ಪಶ್ಚಿಮಕ್ಕೆ ಚಲಿಸುವ ಕಾರಣ ಮುಂದಿನ 3-4 ದಿನ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಾಮಾನ್ಯ ಮಳೆ ಮುಂದುವರೆಯಬಹುದು.ಮುಂಗಾರು ದುರ್ಬಲ ಆಗಿರುವ ಕಾರಣ ಮುಂದಿನ ದಿನಗಳಲ್ಲಿ ವಾಯುಭಾರಕುಸಿತಗಳು ಆದರೇ ಮಾತ್ರ ಒಂದೊಂದು ವಾರ ಉತ್ತಮ ಮಳೆಯಾಗಬಹುದು.



Leave a Reply