ಶಿರಸಿ: ಬನವಾಸಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಂತರ್ ಜಿಲ್ಲಾ ದನ ಕಳ್ಳತನ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕಳ್ಳತನಕ್ಕೆ ಬಳಸಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಟಾಟಾ ಇಂಟ್ರಾ ವಾಹನವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಮಹಮ್ಮದ್ ಇಸ್ಮಾಯಿಲ್ (20) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗಿಯ ಮಹಮ್ಮದ್ ವಾಸೀಂ (26) ಎಂದು ಗುರುತಿಸಲಾಗಿದೆ.
ಮೇ 20ರ ರಾತ್ರಿ 11 ಗಂಟೆಯಿಂದ ಮೇ 21ರ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಮುಂಭಾಗ ರಸ್ತೆಯ ಬದಿಯಲ್ಲಿ ಕಟ್ಟಿದ್ದ ಕಪ್ಪು ಬಣ್ಣದ ಆಕಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆಂದು ಬನವಾಸಿ ನಿವಾಸಿ ಮದನ ಮಂಜುನಾಥ ಆರೇರ (29) ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ ಪೊಲೀಸರು, ಜು.16ರಂದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ್ದ ಕೆಎ-17 ಎಎ-7082 ನೋಂದಣಿ ಸಂಖ್ಯೆಯ ಸುಮಾರು
2 ಲಕ್ಷ ರೂ. ಮೌಲ್ಯದ ಟಾಟಾ ಇಂಟ್ರಾ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್.ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ.ಜಿ, ಡಿಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಇ.ಸಿ. ಸಂಪತ್ ಮಾರ್ಗದರ್ಶನದಲ್ಲಿ .
ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಜಿ. ಕುಂಬಾರ ಹಾಗೂ ತನಿಖಾ ಪಿಎಸ್ಐ ರವೀಂದ್ರ ಬಿರಾದರ್ ನೇತೃತ್ವದಲ್ಲಿ ಎಎಸ್ಐ ಮಣಿಮಲನ್ ಕೆ. ಮೇಸ್ತಿ ಹಾಗೂ ಸಿಬ್ಬಂದಿಗಳಾದ ಅಬ್ದುಲ್ ಸಮ್ಮದ್ ಅನ್ಸಾರಿ, ಬಸವರಾಜ್ ಜಾಡರ್, ಮಂಜಪ್ಪ, ರಾಜೇಶ್ ಪಿ.ಎಂ. ಮತ್ತು ಜಗದೀಶ್ ಕೆ. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅಂತಿಂತ ಕಳ್ಳರಲ್ಲ ಇವರು .. ಅಂತರಜಿಲ್ಲಾ ದನಗಳ್ಳರ ಬಂಧನ; ಬನವಾಸಿ ಪೊಲೀಸರ ಯಶಸ್ವಿ ಕಾರ್ಯಾಚರಣೆ







Leave a Reply