ಶ್ರೀರಾಮ ಸ್ಪಡಿ ಸರ್ಕಲ್‌ನ ಅಪೂರ್ವ ನಾಯಕ 4 ಸರ್ಕಾರಿ ಹುದ್ದೆಗಳಿಗೆ ಆಯ್ಕೆ

ಹಂಚಿಕೊಳ್ಳಿ

ಅಂಕೋಲಾ: ರಾಜ್ಯದ ಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾದ ಅಂಕೋಲಾದ ಶ್ರೀರಾಮ ಸ್ಪಡಿ ಸರ್ಕಲ್ ನಲ್ಲಿ ತರಬೇತಿ ಪಡೆದ ಅಪೂರ್ವ ರಾಜೀವ ನಾಯಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ನಾಲ್ಕು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಅಪೂರ್ವ ಅವರು ಶ್ರೀರಾಮ ಸ್ಪಡಿ ಸರ್ಕಲ್‌ನಲ್ಲಿ ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದಿದ್ದರು. ಅವರ ಪರಿಶ್ರಮ ಹಾಗೂ ಸಮರ್ಪಕ ಮಾರ್ಗದರ್ಶನದ ಫಲವಾಗಿ ರಾಜ್ಯ ಮಟ್ಟದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದ್ದಾರೆ.
ಪ್ರಸ್ತುತ ಅವರು ಕೃಷಿ ಮಾರುಕಟ್ಟೆ ಇಲಾಖೆಯ (Department of Agricultural Marketing) ಮಾರ್ಕೆಟಿಂಗ್ ಅಸಿಸ್ಟೆಂಟ್, BWSSBಯ ಜೂನಿಯರ್ ಅಸಿಸ್ಟೆಂಟ್, ಕರ್ನಾಟಕ ಗ್ರಾಮೀಣ ಕೈಗಾರಿಕೆ ಇಲಾಖೆಯ ಜೂನಿಯರ್ ಅಸಿಸ್ಟೆಂಟ್ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ (Department of Technical Education) ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಈ ಸಾಧನೆಯು ಶ್ರೀರಾಮ ಸ್ಪಡಿ ಸರ್ಕಲ್‌ಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದ್ದು, ಸಂಸ್ಥೆಯ ನಿರ್ದೇಶಕ ಸೂರಜ್ ನಾಯಕ ಅವರು ಅಪೂರ್ವ ರಾಜೀವ ನಾಯಕ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds