ಶಾಸಕ ಶಿವರಾಮ ಹೆಬ್ಬಾರರಿಂದ “ಹಳ್ಳಿನ್ಯೂಸ್” ಉದ್ಘಾಟನೆ

ಹಂಚಿಕೊಳ್ಳಿ
ಶಾಸಕರು ಉದ್ಘಾಟಿಸಿದರು.

ಯಲ್ಲಾಪುರ : ಬಹುನಿರಿಕ್ಷಿತ ಗಣಪತಿ ವಾಗಳ್ಳಿ ಅವರ “ಹಳ್ಳಿನ್ಯೂಸ್ ” ನ್ಯೂಸ್ ವೆಬ್ ಸೈಟ್ ಅನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆ ಮಾಡಿದರು.

ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಬಹುನಿರಿಕ್ಷಿತ “ಹಳ್ಳಿನ್ಯೂಸ್” ಬಿಡುಗಡೆ ಮಾಡಿ ಮಾಧ್ಯಮಗಳು ಸಮಾಜಕ್ಕೆ ಉಪಯುಕ್ತವಾದ ಮಾಹಿತಿ ಹಾಕಬೇಕು.  ಸುದ್ದಿ ಧಾವಂತದಲ್ಲಿ  ಸ್ಪಷ್ಟವಿಲ್ಲದ ಮಾಹಿತಿ ಹಾಕಬಾರದು. ಹಳ್ಳಿನ್ಯೂಸ್ ಉತ್ತಮವಾಗಿ ಬರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ “ಹಳ್ಳಿನ್ಯೂಸ್ ” ಮುಖ್ಯಸ್ಥ ಗಣಪತಿ ವಾಗಳ್ಳಿ , ಸಾಮಾಜಿಕ ಮುಖಂಡರಾದ ವಿಜಯ ಮಿರಾಶಿ , ಶಾಸಕರ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ್, ನಾಗರಾಜ್ ನಾಯ್ಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Advertisement


This will close in 3 seconds