ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚಗಲ್ ಗ್ರಾಮದ ಬಳಿಯ ಕಬ್ಬಿನ ಗದ್ದೆಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶ*ವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃ*ತಳನ್ನು ಬದನೂರು ಗ್ರಾಮದ ನಿವಾಸಿ 30 ವರ್ಷದ ಅನುಸೂಯಾ ಲಕ್ಷ್ಮಣ ರಂಗಣ್ಣವರ ಎಂದು ಗುರುತಿಸಲಾಗಿದೆ. ಜುಲೈ 7 ರಂದು ಸಂತೆಗೆಂದು ಲೋಕಾಪುರ ಪಟ್ಟಣಕ್ಕೆ ತೆರಳಿದ್ದ ಅನುಸೂಯಾ ಮರಳಿ ಮನೆಗೆ ಬಂದಿರಲಿಲ್ಲ. ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ದೂರು ದಾಖಲಿಸಿದ್ದರು. ಆದರೆ, 4 ದಿನಗಳ ಬಳಿಕ ಕಬ್ಬಿನ ಗದ್ದೆಯಲ್ಲಿ ಕೊ*ಲೆ ಮಾಡಿ ಬಿಸಾಡಿದ ರೀತಿಯಲ್ಲಿ ಮಹಿಳೆಯ ಶ*ವ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ಈ ಭೀಕರ ಕೊ*ಲೆಯ ಹಿಂದೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಪ್ರಿಯಕರನೇ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮುಧೋಳ ತಾಲೂಕಿನ ಹಲಗಲಿ ಗ್ರಾಮದ ನಿವಾಸಿ ಸೋಮಪ್ಪ ಹಳ್ಳಿ ಎಂಬಾತನ ವಿರುದ್ಧ ಕೊ*ಲೆ ಆರೋಪ ಕೇಳಿಬಂದಿದೆ. ಆತ ಬಸ್ ನಿಲ್ದಾಣದಿಂದಲೇ ಮಹಿಳೆಯ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಕರೆದೊಯ್ದು, ಕೊ*ಲೆ ಮಾಡಿದ ಬಳಿಕ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿ ನಾಪತ್ತೆಯಾಗಿದ್ದಾನೆ ಎಂದು ಮೃ*ತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಮಹಿಳೆಯ ಸಾ*ವಿಗೆ ಕಾರಣ ಎಂದು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆ ನಾಪತ್ತೆಯಾದ ದಿನವೇ ಆರೋಪಿಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಫೋನ್ ನಂಬರ್ ಸಹಿತ ಲೋಕಾಪುರ ಠಾಣೆಯ ಪಿಎಸ್‌ಐ ಅವರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಕೇವಲ ‘ನಾಪತ್ತೆ’ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿ ಆರೋಪಿಯ ಪತ್ತೆ ಹಾಗೂ ಶೋಧ ಕಾರ್ಯದಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿದ್ದಾರ್ಥ್ ಗೋಯಲ್, ಡಿವೈಎಸ್ಪಿ ಹಾಗೂ ಸಿಪಿಐ ಅವರ ಮುಂದೆಯೇ ಲೋಕಾಪುರ ಪಿಎಸ್‌ಐ ವಿರುದ್ಧ ಕುಟುಂಬಸ್ಥರು ವಾಗ್ವಾದ ನಡೆಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.


Leave a Reply