ಜನರ ಸಮಸ್ಯೆಗಳಿಗೆ ಇನ್ನು ಸಿಗಲಿದೆ ಕ್ವಿಕ್ ಸೊಲ್ಯೂಷನ್: ಇದು ಸಿಎಂ ಡಿಕೆಶಿಯ ಬಿಗ್ ಅನೌನ್ಸ್ಮೆಂಟ್

ಹಂಚಿಕೊಳ್ಳಿ

ಬೆಂಗಳೂರು: ರಾಜ್ಯದ ಸಾರ್ವಜನಿಕರ ದೂರು ಹಾಗೂ ಸಮಸ್ಯೆಗಳಿಗೆ ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯಾದ್ಯಂತ ಜನರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಿ, ಪರಿಹರಿಸುವ ಉದ್ದೇಶದಿಂದ ‘ಪ್ರಜಾ ಸೇವೆ’ (Praja Seve) ಎಂಬ ಸಂಪೂರ್ಣ ಹೊಸ ಇಲಾಖೆಯನ್ನು ಸ್ಥಾಪನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಪ್ರಕಟಿಸಿದ್ದಾರೆ.

ವಿಶೇಷವೆಂದರೆ, ಈ ನೂತನ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸಾರ್ವಜನಿಕರ ದೂರುಗಳಿಗೆ ನೇರ ಉತ್ತರದಾಯಿಯಾಗಿಸಲು ಪ್ರತ್ಯೇಕ ಸಚಿವರೊಬ್ಬರನ್ನು (Separate Minister) ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಬರುವ ದೂರುಗಳಿಗೆ ತಕ್ಷಣವೇ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಒದಗಿಸಲು ಈ ಇಲಾಖೆ ಕಾರ್ಯನಿರ್ವಹಿಸಲಿದೆ. ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ಮುಟ್ಟಿಸಲು ಹಾಗೂ ಜನಸಾಮಾನ್ಯರ ಧ್ವನಿಗೆ ನೇರವಾಗಿ ಸ್ಪಂದಿಸಲು ಈ ‘ಪ್ರಜಾ ಸೇವೆ’ ಇಲಾಖೆ ಒಂದು ಪ್ರಮುಖ ಕೊಂಡಿಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Advertisement


This will close in 3 seconds